Showing posts with label ಕವಿತನ. Show all posts
Showing posts with label ಕವಿತನ. Show all posts

Friday, January 9, 2015


ಹರಿವು....
ಓ ಭಾವ ಭಾಗೀರಥಿಯೆ
ಅವತರಿಸೆ ಇನ್ನೊಮ್ಮೆ
ನನ್ನ ಶಿರ ಜಟೆಯಾಗಿ
ನಾನೆ ಶಿವನಾಗಲಿಕೆ.

ಈ ವಿಚಾರದ ತೀರ
ಮುಗಿವಿರದ ನಿಸ್ಸಾರ..
ಮಳೆಯಾಗಿ ಭಾವಗಳೆ
ನಾನು ತೋಯಲಿಕೆ.

ನಗೆಯು ನಗೆಯಂತಿರಲು
ನೋವು ಎದೆ ತೋಯಿಸಲು
ಸಹಜ ಮರುಜೀವಿಸಲು
ಮಳೆಯಾಗು ಭಾವ.

ನಿಂತಿರುವ ನದಿ ಸರಿದು
ಹೊಸ ನೀರು ಒಳ ಹರಿದು
ಎಲ್ಲ ಶುಭವಾಗಲಿಕೆ
ಬಾ ತುಂಬು ಜೀವ.