Saturday, February 22, 2020

ಶಾಲೆಯಲ್ಲಿ ಹೇಳಿಕೊಡದ ಇತಿಹಾಸದ ಕಥೆ

ಉಟ್ಟಬಟ್ಟೆಯಲ್ಲಿ ಹೊರಟುಬಂದವರು – (ಬಾಂಗ್ಲಾ ಹಿಂದುಗಳ ಮೇಲಾದ ಇಸ್ಲಾಮಿಕ್ ಕ್ರೌರ್ಯದ ಕತೆಗಳು) ಅನ್ನುವ ಅಜಮಾಸು ನೂರು ಪುಟಗಳ ಪುಟ್ಟದೊಂದು ಪುಸ್ತಕವು ತಾನು ಬೆಳಕು ಕಂಡು ತಿಂಗಳಾಗುವುದರೊಳಗೆ ಐವತ್ತು ಸಾವಿರ ಪ್ರತಿಗಳ ಮಾರಾಟ ದಾಖಲಿಸಿದೆ. ಖ್ಯಾತನಾಮರ ಕಾದಂಬರಿ ಅಲ್ಲದೆಯೂ, ವಿವಾದಾತ್ಮಕ ಅಂಶಗಳಿಲ್ಲದೆಯೂ ತಿಂಗಳಾಗುವುದರೊಳಗೆ ಎಂಟೆಂಟು ಪ್ರಕಾಶನ ಕಂಡಿದೆಯೆಂದರೆ ಈ ಪುಸ್ತಕದಲ್ಲೇನೋ ಎಲ್ಲರೆದೆಗೆ ನಾಟುವ ಸಂಗತಿ ಇರಲೇಬೇಕು. ಹೌದು, ಇದೆ! ನಮಗ್ಯಾರೂ ಯಾವತ್ತೂ ಶಾಲೆಯಲ್ಲಿ ಹೇಳಿಕೊಡದ ರಣವಾಸ್ತವವನ್ನು ಅತ್ಯಂತ ನಿರ್ಲಿಪ್ತ ದನಿಯಲ್ಲಿ ನಿಜದ ಇತಿಹಾಸ ಶಿಕ್ಷಕನಂತೆ ಹೇಳಿಕೊಡಲು ನಿಂತ ಈ ಪುಸ್ತಕದಲ್ಲಿ ಎದೆಗೆ ಸೋಕುವ ಅದೇನೋ ಇದೆ!

ಅಯೋಧ್ಯಾ ಪ್ರಕಾಶನದಡಿಯಲ್ಲಿ ಮೂರೂರಿನ ವಿನಾಯಕ ಭಟ್ಟ, ರೋಹಿತ್ ಚಕ್ರತೀರ್ಥ, ಗೀರ್ವಾಣಿ ಮತ್ತು ವೃಷಾಂಕ ಭಟ್ಟ ಸಂಕಲಿಸಿ ಬರೆದ ಈ ಪುಸ್ತಕಕ್ಕೆ ಶುರುವಾತಿನ ಮಾತು ಎಸ್ಸೆನ್ ಸೇತುರಾಂ ಅವರದು. ಐವತ್ತು ವರ್ಷಗಳ ಹಿಂದೆ ತಮ್ಮ ನೆಲ, ನೆಲೆ, ಬಳಗ, ಬೆಳೆ, ಬದುಕು ಮತ್ತು ಕನಸು ಎಲ್ಲವನ್ನೂ ಬಿಟ್ಟು ಜೀವವೊಂದನ್ನುಳಿಸಿಕೊಳ್ಳಲು ಭಾರತಕ್ಕೆ ಬಂದ ಬಾಂಗ್ಲಾದೇಶಿ ಹಿಂದುಗಳ ನೋವಿನ ಕಥೆಗಳ ಸಂಕಲನ ಇದು. ಉಟ್ಟಬಟೆಯಲ್ಲಿ ಹೊರಟುಬಂದವರ ಕುರಿತ ಈ ಪುಸ್ತಕವು ಹತ್ತೊಂಬತ್ತು ಬೇರೆ ಬೇರೆ ವ್ಯಕ್ತಿಗಳ ಬದುಕಿನ ದುರಂತವನ್ನು ಅತ್ಯಂತ ಕ್ಲೃಪ್ತವಾಗಿ ಹೇಳಿ ಮುಗಿಸಿ ನಮ್ಮನ್ನು ಚಿಂತನೆಗೆ ಹಚ್ಚಿಬಿಡುತ್ತದೆ; ಭಾರತದ ನಾಳೆಗಳ ಕುರಿತಾಗಿ ಅದೊಂದು ಎಚ್ಚರಿಕೆಯನ್ನು ಅತ್ಯಂತ ತಣ್ಣನೆಯ ದನಿಯಲ್ಲಿ ಸಶಕ್ತವಾಗಿ ರವಾನಿಸುತ್ತದೆ.

ದೇಶವಿಭಜನೆಯೆಂಬ ಹಾಲಾಹಲವನ್ನು ಕುಡಿದೂ ಜೀವಂತವಿರುವ ಬಾಂಗ್ಲನ್ ಹಿಂದೂಗಳ ನೋವಿನ ಕಾರಣವೆಲ್ಲ ಒಂದೇ, ಅದು ಇಸ್ಲಾಮಿಕ್ ಕ್ರೌರ್ಯ. ಇಸ್ಲಾಮಿಕ್ ಕ್ರೌರ್ಯವನ್ನು ಇಸ್ಲಾಮಿಕ್ ಕ್ರೌರ್ಯ ಎಂದು ಕರೆಯಲು ಹಿಂಜರಿಯದೇ, ಭಿಡೆ ಮಾಡಿಕೊಳ್ಳದೇ ಇರುವುದೇ ಪುಸ್ತಕದ ಹೆಚ್ಚುಗಾರಿಕೆ. ಇತಿಹಾಸದ ನೋವನ್ನು ಹೇಳುವಾಗ ಅದನ್ನು ಶಬ್ದಗಳಲ್ಲಿ ವೈಭವೀಕರಿಸುವ ಉಮೇದು ಸಾಮಾನ್ಯವಾಗಿ ಬರಹಗಾರರಲ್ಲಿ ಇರುತ್ತದೆ. ನೋವಿಗಿರುವಷ್ಟು ಸಬ್-ಸ್ಕ್ರೈಬರ್ಸು ಇನ್ಯಾವುದಕ್ಕೂ ಇರುವುದಿಲ್ಲ ನೋಡಿ! ಹಾಗಾಗಿ ಸಾಮಾನ್ಯವಾಗಿ ಬರಹಗಾರರು ಐತಿಹಾಸಿಕ ಪ್ರಮಾದವನ್ನು ಹೇಳುವಾಗ ಅತಿರಂಜನೆಗೆ ಕಟ್ಟುಬೀಳುವುದಿದೆ. ಆದರೆ ಈ ಪುಸ್ತಕದಲ್ಲಿ ನಾವು ನೀವು ಕೇಳರಿಯದಷ್ಟು ಕ್ರೂರ ವಾಸ್ತವದ ತಣ್ಣನೆಯ ವಿವರಣೆ ಇದೆ. ಶಬ್ದಾಡಂಬರಕ್ಕೆ ಜೋತುಬೀಳುವ ಪ್ರಮಾದವನ್ನು ನಾಲ್ವರೂ ಲೇಖಕರು ಮಾಡದೇ ಇದ್ದಿದ್ದು ಬಲುದೊಡ್ಡ ಧನಾತ್ಮಕ ಅಂಶ. ಇಲ್ಲಿನ ವಿವರಣೆಯು ಪತ್ರಿಕೆಯ ವರದಿಯಂತೆ ಶುಷ್ಕವೂ ಅಲ್ಲ, ಕ್ರಿಯೇಟಿವ್ ಬರಹದಂತೆ ರಂಜಿತವೂ ಅಲ್ಲ – ಇತಿಹಾಸವನ್ನು ಹೇಳಲು ಹದಗೊಳಿಸಿಕೊಂಡ ಅತ್ಯಂತ ಯುಕ್ತವಾದ, ಕನ್ನಡದ ಅಪರೂಪದ ಟೋನ್ ಇದು. ಪುಸ್ತಕದಲ್ಲಿ ಬಹಳೇ ಇಷ್ಟವಾದ ಅಂಶವೇ ಈ ಟೋನ್. ಈ ಪುಸ್ತಕವನ್ನೋದುತ್ತ ನಿಮ್ಮಲ್ಲಿ ಬಾಂಗ್ಲನ್ ಸಾಬಿಗಳ ವಿಷಯದಲ್ಲಿ ಕ್ರೋಧ ಭುಗಿಲೇಳುವುದಕ್ಕಿಂತ ಹೆಚ್ಚಾಗಿ ಭಾರತದ ನಾಳೆಗಳ ಕುರಿತಾಗಿ ಎಚ್ಚರು ಹೊತ್ತಿಕೊಳ್ಳುತ್ತದೆ. ಇತಿಹಾಸದ ಪುಸ್ತಕಗಳು ಹೇಳಿಕೊಡಬೇಕಾದ್ದು ಅದನ್ನೇ ತಾನೆ!   

ಇಸ್ಲಾಂ ಅನ್ನುವುದು ಹಬ್ಬಿದಲ್ಲೆಲ್ಲ ಬೇರೆ ಯಾವುದೇ ಆಚರಣೆ, ನಂಬಿಕೆ ಮತ್ತು ಜೀವನ ವಿಧಾನಕ್ಕೆ ಜಾಗೆಯಿರುವುದಿಲ್ಲ ಅನ್ನುವುದನ್ನು ಪ್ರಕಾಶಕರು ಸ್ಪಷ್ಟ ಮಾತುಗಳಲ್ಲೇ ಹೇಳಿದ್ದಾರೆ. ಇದು ಸುಳ್ಳು ಎಂದು ಯಾರಿಗಾದರೂ ಅನ್ನಿಸಿದರೆ ಅವರು ಇತಿಹಾಸ ಓದಬೇಕು, ಅದಕ್ಕೂ ಮೊದಲು ಈ ಪುಸ್ತಕವನ್ನೋದಬೇಕು. ಇಸ್ಲಾಮಿನ ಕ್ರೌರ್ಯಕ್ಕೆ ಎಣೆಯೇ ಇಲ್ಲ ಅನ್ನುವುದು ಜಗತ್ತಿನೆದುರು ಪದೇ ಪದೇ ಸಾಬೀತಾಗುತ್ತಿದೆ. ಸಿರಿಯಾದ ಐಸಿಸ್ ನ ಕ್ರೌರ್ಯದ ಕಥೆಗಳು ಜಾಹೀರಾಗಿವೆ. ಆದರೆ ಘನವಾದ ಗ್ಲೋಬಲ್ ಡಿಬೇಟ್ ಗೆ ಸಿಗದೇ ಹೋದ ಈ ಬಗೆಯ ಇಸ್ಲಾಮಿಕ್ ಕ್ರೌರ್ಯದ ಎಷ್ಟೋ ಕಥೆಗಳಿವೆ. ೧೯೭೧ ರ ಬಾಂಗ್ಲಾ ಹಿಂದೂ ಹತ್ಯಾಚಾರ ಕಾಂಡ ಮತ್ತು ೧೯೮೦-೯೦ ರ ಕಶ್ಮೀರಿ ಪಂಡಿತರ ಮಾರಣಹೋಮಗಳು ಅಂಥಾ ಅನ್ ಅಟೆಂಡೆಡ್ ಕಥೆಗಳಲ್ಲಿ ಕೆಲವು. ಅವತ್ತು ಕಿತ್ತೆದ್ದು ಬಂದ ಬಾಂಗ್ಲನ್ ಹಿಂದೂ ನಿರಾಶ್ರಿತರಿಗೆ ಕರ್ನಾಟಕದ ರಾಯಚೂರಿನ ಸಿಂಧನೂರಿನಲ್ಲೂ ಪುನರ್ವಸತಿ ಕಲ್ಪಿಸಲಾಗಿದೆ ಅನ್ನುವ ಸಂಗತಿ ನಮ್ಮಲ್ಲನೇಕರಿಗೆ ತಿಳಿಯದ ವಿಚಾರ. ಇವತ್ತು ಭಾರತ ಸರಕಾರ ಸಾಂವಿಧಾನಿಕ ಮಾರ್ಗದಲ್ಲಿ ಪೌರತ್ವ ಕೊಡಲು ಹೊರಟಿರುವುದು ಇವತ್ತಿನವರೆಗೂ ಭಾರತದ ಪೌರತ್ವ ಇಲ್ಲದೇ ಬದುಕಿದ್ದ ಈ ಜನಕ್ಕೆ. ಭಾರತದ ಇಸ್ಲಾಮಿಗೆ ಈ ಕುರಿತೂ ಸಹ ಅಸಮಾಧಾನವಿದೆ ಅನ್ನುವುದನ್ನು ಗಮನಿಸಿ. ಈ ಪುಸ್ತಕದ ಮೂಲಕ ವಿಭಜನೆಯ ಸೈಡ್ ಎಫೆಕ್ಟುಗಳ ಸಣ್ಣ ಪರಿಚಯವೊಂದು ಓದಿಗನಿಗಾಗುತ್ತದೆ. ಪ್ರವೀಣ್ ಪಟವರ್ಧನ್ ಮತ್ತು ಪ್ರಶಾಂತ್ ವೈದ್ಯರಾಜ್ ಇದೇ ಪುಸ್ತಕವನ್ನು The genocide that was never told  ಅನ್ನುವ ಹೆಸರಲ್ಲಿ ಇಂಗ್ಲೀಷಿಗೆ adapt ಮಾಡಿದ್ದಾರೆ. ಅವರು ಬಳಸಿದ ಇಂಗ್ಲೀಷಲ್ಲೂ ಅದೇ ಹದ- jargon ಗಳ ಹಾವಳಿಯಿಲ್ಲದ,  ಹಾಗೇ ಅತಿಯಾಗಿ loose translation ಕೂಡ ಅಲ್ಲದ – ಇತಿಹಾಸಕ್ಕೆ ಒದಗುವ ಟೋನ್ ಅನ್ನು ಸಿದ್ಧಿಸಿಕೊಳ್ಳಲಾಗಿದೆ. ಸದ್ಯದಲ್ಲಿಯೇ ಪುಸ್ತಕದ ಹಿಂದೀ ಸಂಸ್ಕರಣವೂ ಮಾರುಕಟ್ಟೆಗೆ ಬರಲಿದೆಯೆಂಬುದು ಅಯೋಧ್ಯಾ ಪ್ರಕಾಶನದ ವಿಶ್ವಾಸ. 

ಒಂದಂತೂ ಸತ್ಯ. ಸೆಕ್ಯುಲರಿಸಮ್ಮಿನ ಹೆಸರಲ್ಲಿ ಹಿಂದೂ ತನ್ನ ಗುರುತನ್ನು ಮರೆಯುತ್ತ ಹೋದಂತೆಲ್ಲ ಇಸ್ಲಾಂ ತನ್ನ ಕಬಂಧ ಬಾಹುಗಳನ್ನು ಚಾಚಿ ಈ ದೇಶವನ್ನು ನುಂಗಿಹಾಕಬಲ್ಲದು. ಅದಕ್ಕೆ ಇತಿಹಾಸದ ಸಾಕ್ಷಿಯಿದೆ. ಮೈ ತುಂಬ ಎಚ್ಚರ ಇಟ್ಟುಕೊಂಡು ಬದುಕಬೇಕನ್ನುವ ವಾಸ್ತವವನ್ನು ಹಿಂದೂ ಆದಷ್ಟು ಬೇಗ ಅರ್ಥ ಮಾಡಿಕೊಳ್ಳಬೇಕಿದೆ. ನಾಜೂಕಯ್ಯರಂತೆ ಸೆಕ್ಯುಲರಿಸಮ್ಮಿನ ಸೂಡೋ-ಕಂಫರ್ಟ್ ಒಳಗಡೆ ಬಂಧಿಯಾಗುತ್ತ ಹೋದರೆ ಬಾಂಗ್ಲನ್ ಹಿಂದುಗಳಿಗಾದ ಸ್ಥಿತಿಯೇ ಭಾರತದ ಹಿಂದೂವಿಗೂ ಬರುವುದು ಖಚಿತ. ನಿರಾಶ್ರಿತರ ಕ್ಯಾಂಪಿನಲ್ಲಿ ಟ್ಯೂಷನ್ ಹೇಳಿಕೊಡುತ್ತಿರುವ ಬಾಂಗ್ಲಾ ಹಿಂದೂ ರಂಜಿತ್ ಹೇಳುವಂತೆ “ನಮ್ಮ ಮಕ್ಕಳಿಗೆ ಇತಿಹಾಸದ ಪರಿಚಯವಿರಬೇಕು, ಆದರೆ ಅವರು ಭಯೋತ್ಪಾದಕರಾಗಬಾರದು”. ಇಸ್ಲಾಮಿನ ಕ್ರೌರ್ಯವನ್ನು ಸಹಿಸಲಾರದೆ ಬಾಂಗ್ಲಾದಿಂದ ಸಾವಿರಾರು ಮೈಲಿಗಳಷ್ಟು ದೂರದ ಕರ್ನಾಟಕಕ್ಕೆ ಬಂದು ಈಗೀಗಷ್ಟೇ ಸರಿಯಾದ ಬದುಕು ಕಾಣುತ್ತಿರುವ ಈ ಜನಗಳಿಗೆ ಇವತ್ತಿಗೆ ಮತ್ತೆ ಮುಸ್ಲಿಂ ಹುಡುಗರ ಕಿರುಕುಳ ಶುರುವಾಗಿದೆ. ಆದರೆ ಅಂಥ ಪುಂಡರ ಗುಂಪುಗಳನ್ನು ಸ್ಥಳೀಯ ಹಿಂದೂ ಹುಡುಗರು ಸಮರ್ಥವಾಗಿ ಎದುರಿಸಿ ಹೊರದಬ್ಬುತ್ತಿದ್ದಾರೆ ಅನ್ನುವ ಪಾಸಿಟಿವ್ ನೋಟ್ ನೊಂದಿಗೆ ಪುಸ್ತಕ ಮುಗಿಯುತ್ತದೆ. ಮತ್ತು ಇವತ್ತಿನ ಹಿಂದೂ ಮಾಡಬೇಕಾಗಿರುವುದೇನು ಅನ್ನುವ ಸಂದೇಶವನ್ನೂ ರವಾನಿಸಿಬಿಡುತ್ತದೆ.